Listen "01: ನಾಗರಾಜ ವಸ್ತಾರೆ"
Episode Synopsis
Hi,
ಅಲೆದಾಟಕ್ಕೆ ಸ್ವಾಗತ. ನನ್ನ ಅಲೆದಾಟದ ಮೊದಲನೇ ನಿಲ್ದಾಣ ಬೆಂಗಳೂರು.
ನಾನು ಮೊದಲನೇ ಸಲ ಬೆಂಗಳೂರಿಗೆ ಬಂದಿದ್ದು ಐದೋ ಆರನೇ ಕ್ಲಾಸಿಲ್ಲಿದ್ದಾಗ ಇರ್ಬೇಕು. ಅಪ್ಪ ಕರ್ಕೊಂಡು ಬಂದಿದ್ರು. ಸಪ್ನಾ ಬುಕ್ ಹೌಸಿಗೆ ಹೋಗಿ ತೇಜಸ್ವಿ ಅವರ ಒಂದಿಷ್ಟು ಪುಸ್ತಕ ತಂದಿದ್ದಷ್ಟೇ ನೆನಪಿರೋದು. ಅದಕ್ಕೂ ಮೊದಲೊಮ್ಮೆ ಬೆಂಗಳೂರಿಗೆ ಬಂದಿದ್ದೆ ಅನ್ನೋಕೆ ಫೋಟೋಗಳಿವೆ, ನೆನಪುಗಳಿಲ್ಲ.
ನಾನು ಸುಮಾರು ವರ್ಷಗಳ ನಂತರ ಬೆಂಗಳೂರಿಗೆ ಮತ್ತೆ ಬಂದಿಳಿದಾಗ, ಈ ಊರಿನ ಚಹರೆ ಎಷ್ಟೊಂದು ಬದಲಾಗಿ ಹೋಗಿದೆ ಅನ್ನಿಸ್ತು. ಒಂದಿದ್ದ ಕೆಎಸ್ಸಾರ್ಟಿಸಿ ಬಸ್ಸ್ಟ್ಯಾಂಡು ಮೂರೂ ತುಂಡಾಗಿ ಬಿದ್ದಿದೆ, ಅವುಗಳ ಮಧ್ಯೆ ಮೆಟ್ರೋ ಬಂದು ಕೂತಿದೆ.
ಹೊರಗೆ ಬಿದ್ರೆ, “ಏನಾಯಿತು ಈ ಶಹರಕ್ಕೆ, ಎಲ್ಲಿ ನೋಡಿದರೂ ಹೊಗೆಯೋ ಹೊಗೆ” ಅನ್ನೋ ಫೀಲ್ ಬರತ್ತೆ. ಈ ಬದಲಾಗುತ್ತಿರೋ ಶಹರನ್ನಂತೂ ಯಾರು ಹಿಡಿದಿದ್ದಕ್ಕೆ ಆಗಿಲ್ಲ, ಆದರೆ ಈ ಶಹರದ ಬದಲಾವಣೆಗಳನ್ನ ಪುಟಗಳಲ್ಲಿ ತುಂಬಾ ಚೆನ್ನಾಗಿ ಹಿಡಿಟ್ಟಿರೋ ಕಥೆಗಾರ ನಾಗರಾಜ ವಸ್ತಾರೆ. ನಾನು ಅವರೊಂದಿಗೆ ಕೂತು, ಒಂದ್ ಒಂದೂವರೆ ಗಂಟೆ ಆಡಿದ ಮಾತು ಕತೆ ನಿಮ್ಮ ಮುಂದಿದೆ. ಸಾಹಿತ್ಯ, ಗ್ಲೋಬಲೈಝಷನ್, ಕ್ಯಾಪಿಟಲಿಸಂ, ರಾಜಕೀಯ, ಧಾರ್ಮ, ಆರ್ಕಿಟೆಕ್ಚರ್, ಫ್ಯಾಶನ್, ಕ್ಲೈಮೇಟ್ ಚೇಂಜ್ ಹೀಗೆ ಹಲವಾರು ವಿಷಯಗಳು ಕುರಿತು ನಮ್ಮ ಮಾತು ಸಾಗಿತು. ಇಷ್ಟ ಆಗತ್ತೆ ಅನ್ಕೊಂಡಿದೀನಿ.
---------------------------------------------
Background Music by:
River Flute by Kevin MacLeod
Link: https://incompetech.filmmusic.io/song/4713-river-flute/
License: http://creativecommons.org/licenses/by/4.0/
intro music: https://audionautix.com/Music/RunningWaters.mp3
Jason Shaw - Composer Producer Engineer

More episodes of the podcast Aledaata
ಮಲೆಗಳಲ್ಲಿ ಮದುಮಗಳು...
25/02/2020
00: ಏನಿದು ಅಲೆದಾಟ?
11/02/2020
ZARZA We are Zarza, the prestigious firm behind major projects in information technology.